ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ
ಸುಮಾರು 400 ವರ್ಷಗಳ ಹಿಂದೆ, ಶ್ರೀ ಗುರುಲಿಂಗ ಮುನಿ ಪುಂಗರವರ ಶೇವಕನಾದ ಸಂಗ್ರಾಮನಿಗೆ ದೀಕ್ಷೆ ಮಾಡಿ, ಮಂತ್ರೋಪದೇಶವನ್ನು ಹಾಗೂ ಶಕ್ತಿ ಮಂತ್ರವನ್ನು ಉಪದೇಶ ಮಾಡಿದರು. ನಂತರ ಅವನು ದೇವಗಿರಿಯ ದೇವಿಯ ವಾಸವಾದ ಸ್ಥಾನಕ್ಕೆ ಕಳುಹಿಸಿ ಅಲ್ಲಿ ತಪೋನುಷ್ಠಾನ ಮಾಡಲು ಹೆಳಿ ಕಳುಹಿಸಿದರು .
ಅಲ್ಲಿ ಸಂಗ್ರಾಮನು ತಪೋನುಷ್ಠನವನ್ನು ಮಾಡಿ ಅದರ ಪ್ರಭಾವದಿಂದ ಹೈದ್ರಬಾದ ನಿಜಾಮ 103 ಹಳ್ಳಿಗಳನ್ನು ಉಂಬಳಿ ಬರೆದು ಕೊಟ್ಟರು ಅಲ್ಲಿಯೆ ರಾಜನಾಗಿ 103 ಹಳ್ಳಿಗಳನ್ನು ಆಳತೋಡಗಿದನು.
ಮುಂದೆ ಅವನ ಸ್ವಪ್ನದಲ್ಲಿ ದೇವಿಯು ಬಂದು ಅಲ್ಲಿಂದ ನಾಲ್ಕು ಕೂಗಳಲೆಯ ಮೆಲೆ ನನ್ನದೊಂದು ಮಂದಿರವಿದೆ ನನ್ನ ಪತಿದೇವನು ನನ್ನ ಸನಿಹದಲ್ಲಿ ಇರ ಬಯಸಿದ್ದಾನೆ , ಕಾರಣ ನನ್ನ ಮಂದಿರದಲ್ಲಿರುವ ಮೂರ್ತಿಯನ್ನು ತೆಗೆದು ನನ್ನ ಪತಿಯ ಮೂರ್ತಿಯನ್ನು ವಿಧಿಯತ್ತಾಗಿ ಸ್ಥಾಪಿಸಿ ಎಂದು ಮರೆಯಾದ ಆಗ ಸಂಗ್ರಾಮನು ತನಗೆ ಬೆಕಾದವರ ಮುಂದೆ ತನ್ನ ಸ್ವಪ್ನದ ಬಗ್ಗೆ ಹೆಳಿದನು.
ಆದರೆ ಸ್ವಾಮಿ ಎಲ್ಲದ್ದಾನೆ ಎಂದು ಚಿಂತಿತನಾದ ಆಗ ವೀರಭದ್ರ ಸ್ವಾಮಿ ಸ್ವಪ್ನದಲ್ಲಿ ಬಂದು ನಾನು ಒಂದು ಹೋಲದಲ್ಲಿ ಇದ್ದೆನೆ ನನ್ನನ್ನು ಒಕ್ಕಲಿಗನೊಬ್ಬ ನೇಗಿಲಕ್ಕೆ ಕಟ್ಟಿ ಊಳುಮೆ ಮಾಡುತಲಿದ್ದಾನೆ ದಿನವು ಸಂಜೆಯ ತನಕ ನೆಗಿಲಕ್ಕೆ ಕಟಿ ಉಳುಮೆ ಮಾಡಿ ಸಾಯಂಕಾಲ ಅಲ್ಲಿ ಬಿಸಾಡಿ ಹೋಗುತ್ತಾನೆ.
ನಾನು ಮೋದಲಿನ ಸ್ಥಾನದಲ್ಲೆ ರುತ್ತಿದ್ದೆ ಮತ್ತೆ ಮರುದಿವಸ ಎತ್ತಿ ಮರುದಿವಸ ಎತ್ತಿ ತಂದು ನೆಗಿಲಕ್ಕೆ ಕಟ್ಟಿ ಹೋಲ ಉಳುತ್ತಿದ್ದ ಹಿಗೆ ನಡೆಯುತಲಿದ್ದು ಇದನ್ನು ಪರಿಕ್ಷಿಸಿ ನನ್ನನ್ನು ದೇವಿ ಮಂದಿರದಲ್ಲಿನ ನನ್ನ ಮೂರ್ತಿಯನ್ನು ತೆಗೆದು ನಿನ್ನ ಗುರುಗಳ ಹಸ್ತದಿಂದ ಶಾಸ್ಥ್ರೋಪ್ತವಾಗಿ ಸ್ಥಾಪಿಸಿ ಎಂದು ಹೆಳಿ ಮರೆಯಾದ. ಆಗ ಪರಿಕ್ಷಿಸಿ ಆ ಯಾವ ಶೀಲಮೂರ್ತಿಯನ್ನು ತಂದು ಮರೆಯಾದ.
1741 ಇದನ್ನು ಸ್ಥಾಪಿಸಲಾಗಿದೆಎಂದು ಹಸ್ಥ ಪ್ರತಿಯಲ್ಲಿ ಬರೆಯಲಾಗಿದೆ ಮತ್ತು ಆ ಗುರುಗಳ ಪರಂಪರೆಯವರೆ ಈಗ ನಾವಿದ್ದು ನಮ್ಮಲ್ಲಿಯ ಆಧಾರದ ಮೇಲೆ ಕಳುಹಿಸಿ ಕೋಟ್ಟಿದ್ದೆವೆ.